ಬೇಲಿಯಾಚೆಯಲಿ ಮುಳ್ಳಿನ ಗಿಡಗಿಡದ ತುದಿಯಲೊಂದು ಚೆಲುವ ಗುಲಾಬಿಆ ಹೂವಿಗೂ ಮತ್ತೊಂದು ಕಾವಲು : ಮಾಲಿಮನೆಯವರ ಅಣತಿಯಂತೆ ಕಾಯುವವ;ವೀಕ್ಷಕರ ಕಣ್ಣು ಹೂವ ಮೇಲೆನೋಡುವಾಸೆ, ಮುದ್ದಿಡುವಾಸೆ,ಹೂವಿಗದೋ ಹಲವಾರು ಯೋಚನೆಗುಡಿಯಾ ? ಮುಡಿಯಾ ? ದ್ವಂದ್ವ..ಅಥವಾ ಪ್ರೇಮಿಯ ಕೈಯೋ ?ಚೆಲುವಿಗೂ ಮನವಿದೆ..ಗುಣವಿದೆಅನ್ಯರಲಿ ಬೆರೆವ ತುಡಿತವಿದೆ..ಅರಿಯಬೇಕಷ್ಟೇ ! ಅರಿತುಭಾವನೆಗಳ ಮನ್ನಿಸಬೇಕಷ್ಟೇ;ಹಿಂಸಿಸಿ ನೋವಿಸಬಾರದಷ್ಟೇ..!ದುಂಬಿ ಸುತ್ತುವುದು,ಕಾವಲು ಕೋಟೆ ಬೇಧಿಸುವುದು;ಹೂವಿನ ಚೆಲುವಿರುವವರೆಗೆಹೂವು ತಾ ನಗುವುದುಅನ್ಯರಿಗೂ ಖುಷಿ ಕೊಡುವುದುಅದರಲ್ಲಿ ಯವ್ವನ ಇರುವವರೆಗೆ !!