Friday 9 August 2013

ಕಾಲ ಗತಿ



ಕಾಲಚಕ್ರಕ್ಕೊಂದು ಕೀಲಿ ಮಾಡಬೇಕೆಂದಿರುವೆ 
ಕುಂಟದೆ, ಓಡುವ ವೇಗಕ್ಕೊಂದು ಕಡಿವಾಣದಂತೆ 
ಮೊನ್ನೆಯ ಬಾಲ್ಯದ ಮುಗ್ದತೆಯಳಿಸಿ 
ನಿನ್ನೆಯ ಯವ್ವನದ ಮಿಡಿತಗಳ ಮರೆಸಿ 
ವರ್ತಮಾನದ ಜೀವ ಜಾಲದಲಿ ಸಿಕ್ಕಿಸಿ 
ನಾಳೆಯ ಚಿಂತೆಗೆ ಒರೆ ಹಚ್ಚಿಸಿದ..... 
ಮುಂಜಾವಿನ ಇಬ್ಬನಿ ಒಣಗುವ ಮುನ್ನ 
ಮದ್ಯಾಹ್ನದ ಉರಿಬಿಸಿಲ ತಾಕಿಸಿ
ಸಂಜೆ ಬರುವ ಮುನ್ನವೇ ನಿತ್ರಾಣವಾಗಿಸಿ 
ಕಳೆದುದನ್ನ ಮೆಲ್ಲುವಂತೆ ಕುಹಕಿಸಿದ ಈ.... 
ಗತಕಾಲಕೆ ಆಮಂತ್ರಣವಿತ್ತರೂ ಬರಲಿಲ್ಲ 
ಗತಘಟನೆಗಳೆಲ್ಲ ಇತಿಹಾಸವಾಯಿತಲ್ಲಾ !
ಮಿತಿಯಿರಲಿ ಚಲನದಲೆಂದು ರವಿ ಶಶಿಗೆಂದರೂ 
ನಡೆಯುತ್ತಿಹರು ಆ ಕಾಲನನುಮತಿಯಂತೆ.... 

3 comments:

  1. ಕವಿತೆಯ ಆರಂಭಕ್ಕೆ ಮುಕ್ಕಾಲು ಅಂಕಗಳು ಕನಕು!

    ReplyDelete
  2. Kavitegu kaviyanne mirisidare kalagalu ellavanu mirisutave ,
    nimma kavanavu channagi mudi bandide.

    ReplyDelete
  3. ಮೆಚ್ಚಿದ ಮಿತ್ರರಿಗೆ ವಂದನೆಗಳು

    ReplyDelete