Sunday 4 August 2013

ಆತ್ಮ ಸ್ನೇಹಿತ




ನನಗರಿತಂತೆ ನನಗಿಹನೊಬ್ಬ 
ಆತ್ಮೀಯ ಗೆಳೆಯ ನನ್ನೊಳಗೆ 
ನನಗರಿವಂತೆ ರವಾನಿಸೆಂದನು 
ಸ್ನೇಹ ಸಂದೇಶವ ನಿಮಗೆಲ್ಲರಿಗೆ !

ಅವನಿಲ್ಲದೆ ನನಗೆಲ್ಲಿದೆ ದ್ಯೈರ್ಯ 
ನಿಮ್ಮೆಲ್ಲರ ಸ್ನೇಹ ಪಡೆಯವ ಸ್ಥೈರ್ಯ 
ಅವನಾಸೆಯಂತೆ ನೀವೆಲ್ಲರೂ 
ಮೆಚ್ಚಿ ಹೆಚ್ಚಿಸಿದಿರಿ ಸ್ನೇಹ ಸೌಂದರ್ಯ !

ಅಚ್ಚಳಿಯದೆ ಉಳಿಯಲೆಮ್ಮ 
ಸಚ್ಚರಿತೆಯ ಶುಭ್ರ ಸ್ನೇಹಹಂದರ 
ಬಿಚ್ಚಿಕೊಳ್ಳದೆ ಹೆಚ್ಚೆಚ್ಚಾಗಲೆಂಬುದೆ
ಎನ್ನ ಮನಸಿನಾಶಯ, ಮಹಾದಾಶಯ !! 

3 comments:

  1. ಒಳ ಮನಸ್ಸೇ ಅವಧೂತ ಗೆಳೆಯ. ತಿದ್ದಬಲ್ಲವನವೇ ತಟ್ಟನೆ.

    ReplyDelete
  2. ಎಲ್ಲೋ ಓದಿದ ನೆನಪು.. ನಮ್ಮ ನೆಚ್ಚಿನ, ಸದಾ ಸಾಥ್ ನೀಡೋ ಒಂದು ಜೊತೆ ಕೈಗಳಿವೆ.. ಆ ಕೈಗಳು ನಮ್ಮ ಕುತ್ತಿಗೆಯ ಕೆಳಗೇ ಇರುತ್ತವೆ(ನಮ್ಮ ಆತ್ಮೀಯ ಮಿತ್ರ ನಾವೇ) ಅಂತ..ಆ ಮಾತುಗಳು ನೆನಪಾಯಿತು.. ಚೆನ್ನಾಗಿದೆ ಕವನ :-)

    ReplyDelete
  3. ಮೆಚ್ಚಿ ಅಭಿಪ್ರಾಯಿಸಿದ ಮಿತ್ರರಿಬ್ಬರಿಗೂ ವಂದನೆಗಳು

    ReplyDelete